ಆಭಯ ಸಿಂಹ ಕನ್ನಡ ಸಿನಿಮಾ ನಿರ್ದೇಶಕರು. ಮತ್ತು ಚಿತ್ರಕತೆ ಬರಹಗಾರರು. ಇವರು ಭಾರತದ ಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ ಹುಟ್ಟಿ ಬೆಳೆದರು. ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಓದಿದರು. == ಜನನ == ಜೂನ್ ೧೨, ೧೯೮೧, ಮಂಗಳೂರಿನಲ್ಲಿ ಜನಿಸಿದರು. == ಶಿಕ್ಷಣ == ಅಭಯ ಸಿಂಹ ಕನ್ನಡ ಐಚ್ಛಿಕವನ್ನು ವಿಶೇಷವಾಗಿ ಓದಿದವರು. ಜೊತೆಗೆ ಇಂಗ್ಲಿಷ್ ಐಚ್ಛಿಕ ಮತ್ತು ಪತ್ರಿಕೋದ್ಯವನ್ನು ಓದಿದ್ದಾರೆ. ಮುಂದೆ ಸಿನಿಮಾ ನಿರ್ದೇಶನವನ್ನು ಪೂನಾದ ದೂರದರ್ಶನ ಸಂಸ್ಥೆಯಲ್ಲಿ ಐಚ್ಛಿಕವಾಗಿ ಅಭ್ಯಾಸ ಮಾಡಿರುವರು. == ಸಾಧನೆ == ೨೦೦೭ರಲ್ಲಿ ಬೆಂಗಳೂರಿನಲ್ಲಿ ಇವರು ಕನ್ನಡ ಸಿನಿಮಾದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ೨೦೦೮ರಲ್ಲಿ ಗುಬ್ಬಚ್ಚಿಗಳು ಎಂಬ ಮಕ್ಕಳ ಚಿತ್ರ, ೨೦೧೨ರಲ್ಲಿ ಶಿಕಾರಿ ಕನ್ನಡ ಚಿತ್ರ. ೨೦೧೩ರಲ್ಲಿ ಸಕ್ಕರೆ ಸಿನಿಮಾ . == ಪ್ರಶಸ್ತಿ == ೨೦೦೮ರಲ್ಲಿ ಇವರ ಗುಬ್ಬಚ್ಚಿಗಳು ಮಕ್ಕಳ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. == ಬಾಹ್ಯ ಕೊಂಡಿ == ://./ == ಉಲ್ಲೇಖ ==